dr bro/Dr bro Betrayal/dr bro YouTuber

 

ಡಾ ಬ್ರೋ'ಗೆ ಮೋಸ: ಬೆನ್ನಿಗೆ ಚೂರಿ ಹಾಕಿದರು ಎಂದ ಸಾಹಸಿ ಯೂಟ್ಯೂಬರ್


Dr Bro: ಡಾ ಬ್ರೋಗೆ ಅನ್ಯಾಯ, ಕ್ಷಮೆ ಕೇಳಿದ ಯೂಟ್ಯೂಬರ್ ಲೋಹಿತ್, ಇಷ್ಟಕ್ಕೂ ನಡೆದದ್ದೇನು?

ಇತ್ತೀಚೆಗೆ ಕನ್ನಡ ಡಿಜಿಟಲ್ ಸ್ಪೇಸ್‌ನಲ್ಲಿ ಯೂಟ್ಯೂಬರ್‌ಗಳು, ಯೂಟ್ಯೂಬ್‌ ಚಾನೆಲ್‌ಗಳು ಮಳೆಗೆ ಎಲ್ಲೆಂದರಲ್ಲಿ ಹುಟ್ಟುವ ಅಣಬೆಗಳಂತೆ ಮಿತಿ ಮೀರಿ ಹುಟ್ಟಿಕೊಂಡಿವೆ. ಆದರೆ ನಿಜವಾಗಿಯೂ ನೋಡತಕ್ಕ ಕಂಟೆಂಟ್ ಹಾಕುವವರು ಬೆರಳೆಣಿಕೆಯ ಯೂಟ್ಯೂಬರ್‌ಗಳಷ್ಟೆ.

ಕನ್ನಡದಲ್ಲಿ ಒರಿಜಿನಲ್ ಕಂಟೆಂಟ್ ಹಾಕುವ ಜನಪ್ರಿಯ ಯೂಟ್ಯೂಬರ್ ಎಂದರೆ ಅದು 'ಡಾ ಬ್ರೋ'. ಬಹಳ ವರ್ಷಗಳಿಂದಲೂ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿರುವ ಡಾ ಬ್ರೋ (ನಿಜವಾದ ಹೆಸರು ಗಗನ್) ಅವರ ಟ್ರಾವೆಲ್ ವ್ಲಾಗ್‌ಗಳಿಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಭಾರತೀಯರು ನೋಡಿರದ, ಕೇಳಿರದ ಊರುಗಳಿಗೆ ಭೇಟಿ ನೀಡಿ ಅಲ್ಲಿನ ಹಳ್ಳಿಗಳು, ಗಲ್ಲಿಗಳನ್ನು ಸುತ್ತಿ ತನ್ನ ಆಡುಭಾಷೆಯಲ್ಲಿಯೇ ಆಯಾ ಸ್ಥಳದ ಮಹಿಮೆ ಸಾರುವ ಡಾ ಬ್ರೋ ಎಂದರೆ ಕನ್ನಡಿಗರಿಗೆ ಒಂದು ರೀತಿಯ ಹೆಮ್ಮೆ ಸಹ. ಆದರೆ ಇದೀಗ ಡಾ ಬ್ರೋಗೆ ತನ್ನದೇ ಫೆಲೋ ಯೂಟ್ಯೂಬರ್ ಒಬ್ಬ ಮೋಸ ಮಾಡಿದ್ದಾನೆ ಈ ಬಗ್ಗೆ ಸ್ವತಃ ಡಾ ಬ್ರೋ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

'ಲೋಹಿತ್ ಕನ್ನಡ ಟ್ರಾವೆಲರ್' ಚಾನೆಲ್‌ನಿಂದ ಮೋಸ

ಲೋಹಿತ್ ಕನ್ನಡ ಟ್ರಾವೆಲರ್' ಚಾನೆಲ್‌ನಿಂದ ಮೋಸ

ಡಾ ಬ್ರೋ ಅವರಿಂದ ಸ್ಪೂರ್ತಿ ಪಡೆದು ಹಲವರು ಟ್ರಾವೆಲ್ ವ್ಲಾಗ್ ಆರಂಭಿಸಿದ್ದು ಅದರಲ್ಲಿ 'ಲೋಹಿತ್ ಕನ್ನಡ ಟ್ರಾವೆಲರ್' ಸಹ ಒಬ್ಬರು. ಇದೇ ಯೂಟ್ಯೂಬರ್‌ನಿಂದ ತಮಗೆ ನಂಬಿಕೆ ದ್ರೋಹ ಆಗಿದೆ ಎಂದು ಡಾ ಬ್ರೋ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕಮ್ಯುನಿಟಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕನ್ನಡಿಗರ ಮೆಚ್ಚಿನ ಡಾ ಬ್ರೋ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದ್ದು, ಬೇರೆ ಕೆಲವು ಯೂಟ್ಯೂಬರ್‌ಗಳು ಸಹ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ತಾಂಜಾನಿಯಾಕ್ಕೆ ತೆರಳಿದ್ದ ಡಾ ಬ್ರೋ

ಆಗಿರುವುದಿಷ್ಟು, ಡಾ ಬ್ರೋ ವ್ಲಾಗಿಂಗ್‌ಗಾಗಿ ತಾಂಜಾನಿಯಾ ದೇಶದ ಪ್ರವಾಸಕ್ಕೆ ಹೋಗಿದ್ದಾಗ ಅವರಿಗೆ ಮೆಸೇಜ್ ಮಾಡಿರುವ 'ಲೋಹಿತ್ ಕನ್ನಡ ಟ್ರಾವೆಲರ್' ನೀವು ತಾಂಜಾನಿಯಾದ ಹಾಡ್ಜಬಿ ಬುಡಕಟ್ಟು ಜನಾಂಗದವರ ವಿಡಿಯೋ ಮಾಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಡಾ ಬ್ರೋ ಹೌದು, ನಾನಾಗಲೇ ಅವರ ಬಗ್ಗೆ ಅಧ್ಯಯನ ಮಾಡಿದ್ದೇನೆ ಭಾನುವಾರ ವಿಡಿಯೋ ಶೂಟ್ ಮಾಡ್ತೀನಿ ಎಂದಿದ್ದಾರೆ. ಅಂತೆಯೇ ಶೂಟ್ ಸಹ ಮಾಡಿದ್ದಾರೆ. ಆದರೆ ಈ ಲೋಹಿತ್ ಕನ್ನಡ ಟ್ರಾವೆಲರ್ ಕೂಡಲೇ ತಾಂಜಾನಿಯಾಗೆ ಹೋಗಿ ಅಲ್ಲಿ ಹಾಡ್ಜಬಿ ಬುಡಕಟ್ಟು ಜನರೊಟ್ಟಿಗೆ ವಿಡಿಯೋ ಮಾಡಿ ಅದನ್ನು ಅಪ್‌ಲೊಡ್ ಮಾಡಿಬಿಟ್ಟಿದ್ದಾರೆ. ಇದು ಡಾ ಬ್ರೋಗೆ ಬೇಸರಕ್ಕೆ ಕಾರಣವಾಗಿದೆ



ಬೆನ್ನಿಗೆ ಚೂರಿ ಹಾಕಿದ್ದಾರೆ: ಡಾ ಬ್ರೋ

'ಹೆಲ್ಪ್ ಮಾಡಿದವರಿಗೇ ಬೆನ್ ಹಿಂದೆ ಚೂರಿ ಹಾಕೋ ಜನರಿರುತ್ತಾರೆ' ಅಂತ ಕೇಳಿದ್ದೆ. ಈಗ ಸ್ವತಃ ನಂಗೆ ಅನುಭವ ಆಗಿದೆ' ಎಂದು ಬರೆದುಕೊಂಡಿರುವ ಡಾ ಬ್ರೋ, ನಾನು ಒಂದು ವಾರದಿಂದ ಆ ಒಂದು ವಿಡಿಯೋಗಾಗಿ ಕಷ್ಟಪಟ್ಟಿದ್ದೆ. ನಾನು ಹೆಚ್ಚು ವಿಡಿಯೋ ಶೂಟ್ ಮಾಡುವುದರಿಂದ ನಾನು ಎಡಿಟ್‌ಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆ ಎಂಬುದು ತಿಳಿದುಕೊಂಡು ಒಂದೇ ದಿನದಲ್ಲಿ ತಾಂಜಾನಿಯಾಗೆ ಬಂದು ತರಾತುರಿಯಲ್ಲಿ ಶೂಟ್ ಮಾಡಿ, ನಾನು ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದರೂ ಅಪ್‌ಲೋಡ್ ಮಾಡಿರುವುದು ಸರಿಯಲ್ಲ ಎಂದು ಡಾ ಬ್ರೋ ಬೇಸರ ಪಟ್ಟುಕೊಂಡಿದ್ದಾರೆ.

'ಎಲ್ಲರನ್ನೂ ಬಿಟ್ಟು ನಿನ್ನ ಚಾನೆಲ್‌ಗೆ ಸಪೋರ್ಟ್ ಮಾಡಿದೆ'


'ಎಲ್ಲರನ್ನೂ ಬಿಟ್ಟು ನಿನ್ನ ಚಾನೆಲ್‌ಗೆ ಸಪೋರ್ಟ್ ಮಾಡಿದೆ'

ಅಲ್ಲದೆ, ನನ್ನನ್ನು ಆಲ್ ಮೋಸ್ಟ್ ಎಲ್ಲ ನ್ಯೂಸ್ ಚಾನೆಲ್ ನವರೂ ಇಂಟರ್ ವ್ಯೂಗೆ ಕರೆದಿದ್ದರು , ಕನಿಷ್ಠ 100 ಜನ ಯೂಟ್ಯೂಬರ್ಸ್ ಕೊಲಾಬ್ರೆಷನ್ ಗೆ ಕರೆದಿದ್ದರು. ಎಲ್ಲ ಬಿಟ್ಟು 'ಲೋಹಿತ್ ಕನ್ನಡ ಟ್ರಾವೆಲರ್' ಕಷ್ಟದಲ್ಲಿದ್ದಾನೆಂದು ಅವನ ವಿಡಿಯೋದಲ್ಲಿ ಕೊಲ್ಯಾಬರೇಟ್ ಮಾಡಿದೆ. ನನ್ನ ಚಾನೆಲ್‌ನಲ್ಲಿ ಸಹ ನಾನು ಸಬ್‌ಸ್ಕ್ರೈಬ್ ಆಗಿ ಎಂದು ಹೇಳಿಕೊಂಡಿರಲಿಲ್ಲ ಆದರೆ ಅವನ ವಿಡಿಯೋದಲ್ಲಿ ಸಬ್‌ಸ್ಕ್ರೈಬ್ ಮಾಡಿ ಎಂದು ಹೇಳಿದೆ. ಆದರೆ ಮಾಡಿದ ಉಪಕಾರಕ್ಕೆ ಈಗ ನನಗೇ ದ್ರೋಹ ಎಸಗಿದ್ದಾನೆ ಎಂದು ಡಾ ಬ್ರೋ ಬರೆದುಕೊಂಡಿದ್ದಾರೆ. ಇನ್ನು ಮುಂದೆಯಾದರೂ ಸಹಾಯ ಮಾಡಿದವರಿಗೆ ಯಾವತ್ತು ನಂಬಿಕೆದ್ರೋಹ ಮಾಡಬೇಡಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ ಡಾ ಬ್ರೋ.

ಗೊತ್ತಾಗದೇ ಅಪ್‌ಲೋಡ್ ಮಾಡಿದೆ ಎಂಬ ಲೋಹಿತ್


ಡಾ ಬ್ರೊ ಕ್ಷಮೆ ಕೇಳಿರುವ ಲೋಹಿತ್, 'ನಿಮಗೆ ತೊಂದರೆ ಕೊಡುವ ಉದ್ದೇಶ ನನಗಿರಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಅಂತ ನಾನು ನಿಮ್ಮನ್ನು ಕೇಳಿ ಆಗಲೇ ಒಂದು ವಾರವಾಗಿತ್ತು. ಆದರೆ ನೀವು ಅದರ ಬಗ್ಗೆ ವೀಡಿಯೊ ಅಪ್‌ಲೋಡ್ ಮಾಡಿಲ್ಲ. ಹೀಗಾಗಿ ನೀವು ಅಲ್ಲಿಗೆ ಹೋಗಿಲ್ಲ ಎಂದು ನಾನು ಭಾವಿಸಿದೆ, ಹಾಗಾಗಿ ನಾನು ಹೋಗಿ ಚಿತ್ರೀಕರಿಸಿ ಅಪ್‌ಲೋಡ್ ಮಾಡಿದ್ದೇನೆ. ಆ ಬುಡಕಟ್ಟಿನ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದೆ. ಅಂತಹ ಅದ್ಭುತ ಸ್ಥಳವನ್ನು ಜನರಿಗೆ ತೋರಿಸುವುದು ನನಗೆ ಇಷ್ಟ. ಹಾಗಾಗಿ ನಾನು ತಾಂಜಾನಿಯಾಗೆ ಹೋಗಿ ವಿಡಿಯೋ ಶೂಟ್ (Vedio Shoot) ಮಾಡಿ ಅಪ್‌ಲೋಡ್ ಮಾಡಿದೆ.

ನೀವು ಆ ದೇಶದಲ್ಲಿದ್ದರೆ ನಾನು ಆ ದೇಶಕ್ಕೆ ಬರಬಾರದು ಎಂದು ಗೊತ್ತಿರಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಎಂದಷ್ಟೇ ನಾನು ಕೇಳಿದ್ದೆ. ನಿಮ್ಮಲ್ಲಿ ಸಹಾಯವನ್ನಾಗಲೀ, ವಿವರಗಳನ್ನಾಗಲೀ ಕೇಳಿರಲಿಲ್ಲ. ಇಷ್ಟಾಗಿಯೂ ನಾನು ಅಪ್‌ಲೋಡ್(Upload) ಮಾಡಿರುವ ಆ ವಿಡಿಯೋ ನಿಮಗೆ ತೊಂದರೆ ಕೊಡುತ್ತಿದ್ದರೆ ನನ್ನನು ಕ್ಷಮಿಸಿ, ಹಿಂದೆ ನಾನು ಹೇಳಿದಂತೆ ನೀವೇ ನನ್ನ ಸ್ಫೂರ್ತಿ(Inspiration), ನಿಮ್ಮ ವ್ಲಾಗ್ ನನಗೆ ಯಾವತ್ತೂ ಇಷ್ಟ. ನನ್ನ ಕನಸಿನಲ್ಲಿಯೂ ನಿಮಗೆ ತೊಂದರೆ ಕೊಡಲು ನಾನು ಟ್ರೈ(Try) ಮಾಡಲ್ಲ, ನೀವು ಪ್ರತಿಯೊಬ್ಬ ಕನ್ನಡಿಗನಿಗೆ ಮಾದರಿ, ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸುತ್ತೇವೆ. ದಯವಿಟ್ಟು ಕ್ಷಮಿಸಿ ಬ್ರೋ' ಎಂದು ವ್ಲಾಗರ್ ಲೋಹಿತ್ ಬರೆದಿದ್ದಾರೆ


Post a Comment

Previous Post Next Post